Tuesday, December 27, 2016

ಒಲವ ಚಿಲುಮೆ

ಬಾ ನೀ ಎದೆ ಬಾಗಿಲಿಗೆ
ತಂಗಾಳಿಯ ಜೊತೆಯಲಿ
ಹೇಳು ನಿನ್ನ ಮನದಾಳವ
ಕಾಯುತಿಹೆ ನಾ ಬೆಳದಿಂಗಳಲಿ

ಕೊರಳಲಿ ಸರಿದ ಮುತ್ತುಗಳು
ನನ್ನಾಕಾಶದ ನಕ್ಷತ್ರಗಳು
ಇರುಳಲೂ ಹಗಲನರಸುತ
ನಿನಗೆಂದೆ ನಾ ಕಾದು ಸೋತೆ

ನಿಂತಿರು ನಿನ್ನೊಳ ನೀನು
ಪೀಡಿಸು ನನ್ನೊಲವ ಮುದದಿ
ನೀ ಸಿಗುವವರೆಗೂ ನಿನ್ನ ಜಪದಿ
ಕೂತಿರುವೆ ನನ್ನೊಳ ನಾನು

Friday, February 1, 2013

ಕೃಷಿಯ ಸಂಕಟ ಮತ್ತು ಯುವಪೀಳಿಗೆ


                                             

  ಕ್ರಿ.ಪೂ. 9000ದಲ್ಲಿ ಭಾರತದಲ್ಲಿ ಕೃಷಿ ಪ್ರಾರಂಭವಾಯಿತು.ಅದಕ್ಕಾಗಿ ಭಾರತ ಇಂದಿಗೂ ಕೃಷಿ ಪ್ರಧಾನ ದೇಶ ಅದರಲ್ಲಿ ಶೇ.40 ಭಾಗ  ಜನರು  ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ತಾತ್ಪರ್ಯವೆಂದರೆ ಈಗಿನ ಕಾಲದಲ್ಲಿ ಎಷ್ಟು ಜನ ಕೃಷಿ ಅವಲಂಭಿಸಿ ಬದುಕುತಿದ್ದಾರೆ? ಎಂಬುದು..ರೈತರ ಸಾಲದ ಹೊರೆ ತಾರಕ್ಕಕ್ಕೇರಿದರೂ ಸರ್ಕಾರ ಮಾತ್ರ ಅಧಿಕಾರ ಜಗ್ಗಾಟದಲ್ಲಿ ನಿರತವಾಗಿದೆ.ಸಾಲದ ಹೊರೆ ತಾಳಲಾರದೆ ರೈತ ಆತ್ಮಹತ್ಯೆಗೆ ಮುಂದಾಗಿದ್ದಾನೆ.

  ಆಧುನಿಕ ತಂತ್ರಜ್ಞಾನ ಯಾವ ರೀತಿಯಲ್ಲಿ ಜನರನ್ನು ಆಕರ್ಷಿಸಿದೆ ಎಂಬುದು ನಾವು ಅರಿಯಲೇ ಬೇಕು.ಅದರ ಮಟ್ಟ ಕೃಷಿ ಹೇಗೆಂದರೆ ಕೃಷಿಕನನ್ನು ಅವನ ಜಾಡನ್ನು ತಪ್ಪಿಸಿ ಕೈಗಾರಿಕ ಮತ್ತುಳಿದ  ಕ್ಷೇತ್ರಗಳಿಗೆ ಎಳೆದುಕೊಳ್ಳುತ್ತಿದೆ.ಕೃಷಿಯ ಈಗಿನ ಸಮಸ್ಯೆ ಒಂದೆರಡಲ್ಲ.ಯುವ ಪೀಳಿಗೆಯಲ್ಲಿ ಕೃಷಿಯ ಆಸಕ್ತಿ ಇಲ್ಲ ಎನ್ನುವುದು ಇಲ್ಲಿ ಸ್ಪಷ್ಟ.ಹಣಕಾಸಿನ ಅಭಾವ ಮತ್ತು ಪೋಷಕರ ಒತ್ತಾಯಕ್ಕಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಇನ್ನೋಂದೆಡೆ.

ಕೃಷಿಯು ಮೂಲೆ ಸೇರಲು ಕಾರಣಗಳೇನು?..
ರೈತ ಈ ಪರಿ ಕೆಳಮಟ್ಟಕ್ಕೆ ಇಳಿಯಲು ಕಾರಣಗಳೇನು?..
ಯುವಪೀಳಿಗೆ ಅಲ್ಪಸ್ವಲ್ಪ ಕಲಿತರೂ ಪಟ್ಟಣ ಸೇರುವುದೇಕೆ?..
1)ಕೃಷಿ ಭೂಮಿಯು ಚಿಕ್ಕಚಿಕ್ಕ ಭಾಗಗಳಾಗಿ ವಿಂಗಡಿಸಿರುವುದು.ಇದರಿಂದ ಸಾಗುವಳಿ ಮಾಡುವ ರೈತನಿಗೆ ನಷ್ಟ ಮಾತ್ರ ಅಲ್ಲ ಶ್ರಮ,ಕಾಲ ವ್ಯಯವಾಗುವುದು ಸಹಜ.

2)ಸಾಲದ ಭಾದೆ ಕಾಡುತ್ತಿದೆ.ಬಡ್ಡಿಯ ಮೊತ್ತಕ್ಕೆ ಬೆಳೆಯು ಸಮವಾಗುತ್ತಿದೆ.ಸರ್ಕಾರದ ಅನುದಾನ ಕಾಲಕಾಲಕ್ಕೆ ಸಿಗದಿರುವುದು.ಇವತ್ತು ಯಾವುದೇ ಬೇಳೆಕಾಳು ಬಡವನ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿಲ್ಲ.

3)ಕೆಲಸಗಾರರ ಅಭಾವ.ದಿನಗೂಲಿ ಆಳುಗಳ ಸಂಖ್ಯೆ ಕಡಿಮೆಯಾಗುತ್ತಿದೆ.ನಗರದ ಕೆಲಸ ಇಷ್ಟಪಡುವ ನೌಕರರು ಹೆಚ್ಚಾಗಿದ್ದಾರೆ.ಕೃಷಿ ಕೆಲಸಕ್ಕೆ ದಿನಗೂಲಿ ಸರಾಸರಿ ರೂ.200 ಇದ್ದರೆ ಪಟ್ಟಣದಲ್ಲಿ ರೂ.300ರಿಂದ 500ರವರೆಗೂ ಕೊಡುವುದುಂಟು ಮತ್ತು ಕೆಲಸ ಹಿತಕರವೆನಿಸುವುದು ನಗರದಲ್ಲಿ ಎಂಬ ಭಾವನೆ ಕೆಲಸಗಾರರಲ್ಲಿ.

4)ನಗರಾಭಿವೃದ್ಧಿ ಕಡೆಗೆ ಎಲ್ಲರ ಒಲುವು.ಪಟ್ಟಣದ ಬದುಕಿಗೆ ಮಾರುಹೋಗಿರುವುದು.ಕೃಷಿ ಭೂಮಿಯನ್ನು ಹಣದ ಆಸೆಗೆ ಮಾರಿ ನಂತರ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವುದು.

5)ಮೂಲತಃ ಕೃಷಿಗೆ ಪ್ರೋತ್ಸಾಹ ಕುಂಟಿತಗೊಂಡಿದ್ದು. ಮುಕ್ಕಾಲು ಭಾಗ  ಈಗಿನ ಪೀಳಿಗೆಯವರು  ರೈತಾಪಿ ಜೀವನದಲ್ಲಿ ಆಸಕ್ತಿ ತೋರಿಸುವುದಿಲ್ಲ.

6)ಪಾಳು ಬಿಟ್ಟ ಭೂಮಿಯು ಜಾಸ್ತಿಯಾಗಿದೆ.ಪ್ರಕೃತಿ ವಿಕೋಪ ತಲೆದೋರುತ್ತಿದೆ.ನಿಸರ್ಗದ ಅಸಮತೋಲನ  ತಾಂಡವವಾಡುತ್ತಿದೆ.

   ಕೃಷಿ ಭೂಮಿಯಲ್ಲಿ ರೈತ ದುಡಿದು ಸುಸ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾನೆ.ಆದ್ದರಿಂದ ತನ್ನ ಪೀಳಿಗೆ ಇದರಲ್ಲಿ ಬೇಯುವುದು ಬೇಡ ಎಂದು ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತಿದ್ದಾನೆ.ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ನೆರಳು ಬಿದ್ದು ರೈತನನ್ನು ನುಂಗಿ ಹಾಕಿದೆ ಎಂದರೆ ತಪ್ಪಾಗಲಾರದು. ಸರಾಸರಿ ಮನೆಗೆ ಒಬ್ಬರಂತೆ ಹಳ್ಳಿಯಿಂದ ನಗರ ಸೇರುತ್ತಿದ್ದಾರೆ.
ಇದರಿಂದಾಗಿ ಕೆಲವೇ ವರ್ಷದಲ್ಲಿ ಜಾಗತಿಕ ಆಹಾರ ಕೊರತೆ ಉಂಟಾಗುವುದು ಖಚಿತ.ಈ ಪರಿಸ್ಥಿತಿಯಲ್ಲೂ ಕೆಲವು ರೈತರು ತಮ್ಮ ಸಹನೆ,ಬುದ್ಧಿ ಹಾಗೂ ಪರಿಶ್ರಮದಿಂದ ಯಶಸ್ಸು ಕಂಡಿದ್ದಾರೆ.ಅವರಿಗೆ ನಮ್ಮೆಲ್ಲರ ಧನ್ಯೋಸ್ಮಿ.
                                                               "ಅನ್ನದಾತೋಃ  ಸುಖೀಭವ"

Tuesday, April 10, 2012

ಕಟ್ಟುನಿಟ್ಟಿನ ಶಿಕ್ಷಣ





ಕಣ್ತೆರೆದು ನೋಡಿದರೆ ಎಲ್ಲವೂ ಹೊಸತು,ಕಲಿಯುವಂತದ್ದು. ಸುತ್ತಮುತ್ತಲಿನ ಪರಿಸರ ಪ್ರಭಾವ ಅತಿಮುಖ್ಯವಾಗಿ ಬೀರುವದು ಅದೇ ವಿದ್ಯಾರ್ಥಿ ಜೀವನದಲ್ಲಿ. ವಿದ್ಯಾಭ್ಯಾಸ ಆ ವಯಸ್ಸಿನಲ್ಲಿ ಅತ್ತ್ಯಮೂಲ್ಯ ಆದರೆ ಈಗಿನ ತಲೆಮಾರಿನ ಪೋಷಕರು ಚಿಕ್ಕಂದಿನಿಂದಲೇ LKG,UKG ಅಂತ ಸೇರಿಸಿದ್ರೆ ಆ ಮಕ್ಕಳ ಬುಧ್ಧಿ ಹೆಚ್ಚಾಗಬಹುದೇ ಅಥವಾ ಮಾನಸಿಕವಾಗಿ ಪರಿಣಾಮ ಆಗಬಹುದೇ? ಆಟ ಆಡಿ ಜ್ಞಾನ ಬೆಳೆಸಿಕೊಳ್ಳುವ ವಯಸ್ಸಿನಲ್ಲಿ ಪಾಠದ ಅರ್ಥ ಹೇಗಾದೀತು??.

ಇದೆಲ್ಲದರ ಮಧ್ಯೆ ಪೋಷಕರ ಕಾಳಜಿ ಕೇಳಬೇಕೇ?.ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ತಾವೇ ಕರೆದುಕೊಂಡು ಹೋಗುತ್ತಾರೆ. ದಾರಿಹೋಕರ ಭಯ. ಬಾಡಿಗೆ ವಾಹನಗಳ ಮೇಲೆ ಭರವಸೆ ಇರುವುದಿಲ್ಲ. ಹೋದ ಮಗು ಶಾಲೆಯಿಂದ ಮನೆಗೆ ನೇರವಾಗಿ ಬರಬೇಕು. "everything is restricted". ಮಕ್ಕಳು ಇಷ್ಟಪಟ್ಟು ಕಲಿಯುವದಕ್ಕಿಂತ ಪಾಲಕರು ಹೇಳಿದ್ದನ್ನು ಓದುವಂತಾಗಿದೆ. ಮಗು ಹುಟ್ಟಿದ ತಕ್ಷಣ ಆ ಮಗುವಿನ ಭವಿಷ್ಯ ಹೀಗೆ ಆಗಬೇಕು ಎಂದು ತಂದೆ-ತಾಯಿ ಬಯಸುತ್ತಾರೆ. ಮಗುವಿನ ಒಲವು ಯಾವುದರಲ್ಲಿದೆ ಎಂದು ತಿಳಿದುಕೊಳ್ಳದೇ ಅವರ ಭವಿಷ್ಯ ನಿರ್ಧರಿಸುವ ಮತ್ತು ಚೌಕಟ್ಟು ನಿರ್ಮಿಸುವ ಪಾಲಕರು ಹೆಚ್ಚಾಗಿದ್ದಾರೆ.

"If you have the aim and dedication in a particular work,you will succeed in it" ಎಂದು ಹಿರಿಯರು ಹೇಳಿದ ಮಾತಿದೆ. ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆ ಇ ದ್ದೇ ಇದೆ ಆದರೆ ಅದನ್ನು ಹೊರಹೊಮ್ಮಿಸುವಲ್ಲಿ ವ್ಯತ್ಯಾಸವಾಗುತ್ತದೆ.
ಭರತ ಭೂಮಿ ಎಂತೆಂತ ಪ್ರತಿಭಾವಂತರನ್ನು ಜಗತ್ತಿಗೆ ನೀಡಿದೆ ಎಂಬುದು ನಮಗೆಲ್ಲ ತಿಳಿದ ವಿಚಾರ.ಇಂತ ಭೂಮಿಯಲ್ಲಿ ಪ್ರತಿಭೆ ಕಡಿಮೆಯಾಗುತ್ತಿಲ್ಲ ಆದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆಯನ್ನು ಹೊರಸೂಸುವುದು ಅವಶ್ಯ.!!

Tuesday, November 8, 2011

ಅವಲೋಕನ

ಸೋತೆ ನಾನು ದೇವರಾಟಕೆ,
ವಿರಾಮ ಹೇಳದೆ ಹೋದೆ ಹಳೆಯ ಬಾಳಿಗೆ,
ಹಲವು ನೆನಪು ನನ್ನಾವರಿಸಿದೆ,
ಕೆಲವು ಮಾತ್ರ ಮರೆಯಲಾಗದೆ!

ಒಲವೇ ಬದುಕ ಬಂಡಿಯಾಗಿ,
ತೇಲುತಿಹುದು ದೋಣಿಯಂತೆ,
ತೆರೆವ ಮನದ ಬಾಗಿಲಿಂದ,
ಬಣ್ಣ ಅಳಿಸಿ ಕಪ್ಪು ಬಳಿದೆ!!

ಮುಗ್ಧವಾಗಿ ಮನವ ದೋಚಿ,
ಮೌನತುಂಬಿ ಗೋಡೆಗೆ ಸಾಚಿ,
ಬದುಕಿ ಸಾಗುವೆ ಬಾಳಲಿ,
ಆ ವಿಧಿ ಬರೆದಂತೆ.!!!
zindagi na milegi dobara

Thursday, September 29, 2011

ಮೌನದ ಗುಟ್ಟು

ಗಾಯ ಮಾಡಿ ಹೃದಯದಲ್ಲಿ ಹೋದೆ ನೀನು ನನ್ನ ಬಿಟ್ಟು,
ಕರೆದರೂ ಕೇಳದೆ ನಿನಗೆ ಈ ನನ್ನ ಮೌನದ ಗುಟ್ಟು,
ಸಾವೆ ಇರದ ಸೋಲಿನ ಹಾದಿ ದಾಟಿ ಬಂದೆ ಕಾತುರದಲ್ಲಿ,
ನನಗಾಗಿ ಕಾಯದಿರು.. ನಿನ್ನನಿಸಿಕೆಯ ಬಿಚ್ಚಿಡು ಮನದಂಗಳದಲ್ಲಿ.!!

Sunday, April 24, 2011

ನೈಜತೆಯ ಬದುಕೋ?....ಬದುಕೇ ನೈಜವೋ?



"ಇಂದಿನ ಶೈಲಿಯ ಬದುಕಿಗೆ ನೈಜತೆ ಕಡಿಮೆ ಇರಬಹುದು,ಆದರೆ ಇದು ಭಾವನೆಗಳ ನಿಜ ಸ್ವರೂಪ".
ಬದುಕು ಇಂದಿನದೇ ಆಗಲಿ, ಮುಂದಿನದೆ ಆಗಲಿ..ಬದುಕಿಗೆ ತನ್ನದೇ ಆದ ನೈಜತೆಯಿದೆ,
ನೈಜತೆಯ ಸೃಷ್ಟಿಗೆ ಭಾವನೆಗಳನ್ನು ಬಲಿ ಕೊಡಬಾರದು. ಭಾವನೆಯಿಂದಲೇ ನೈಜತೆ ಹುಟ್ಟುವುದು.
ಬದುಕಿನ ಶೈಲಿಯನ್ನು ಬಿಂಬಿಸುವ ಪರಿಯು ವ್ಯಕ್ತವಾಗಿರುವ ರೀತಿಯ ಮೇಲೆ ನನ್ನ ನಕಾರವಿದೆ.ಜಪಾನಿನಲ್ಲಿ ಆದಂತ ಸುನಮಿಯಲ್ಲಿ ಸಾವಿರಾರು ಜನ ಇಹಲೋಕ ತ್ಯಜಿಸಿದರು,ಅದಕ್ಕೆ ತಕ್ಕಂತೆ ಪ್ರಪಂಚದ ಜನ ಮೊದಲು ವಿಷಾದ,ಬೇಸರ ತಿಳಿಸಿ ಆಮೇಲೆ ಆ ದೇಶದ ಮುಂದಿನ ಬದುಕಿನ ಕಡೆಗೆ ತಲೆ ಹಾಕಿದರು.ಹಾಗಾಗಿ ಮೊದಲು ಭಾವನೆ ಆಮೇಲೆ ಬದುಕು.
ಹೆಣ್ಣಿನ ಮುಖವನ್ನು ಹುಣ್ಣಿಮೆಯ ಚಂದ್ರನಿಗೆ ಹೋಲಿಸುತ್ತಾರೆ..ಅದೇ ಶನಿ ಗ್ರಹಕ್ಕೆ ಯಾಕೆ ಹೋಲಿಸುವುದಿಲ್ಲ?
ಮಹಾಭಾರತದಲ್ಲಿ ಬರುವ ಕರ್ಣನ ಸಿಟ್ಟನ್ನು ಕೆಂಪಗೆ ಕಾದ ಕೆಂಡಕ್ಕೆ ಹೋಲಿಸುತ್ತಾರೆ..ಅದೆ ಯಾಕೆ ಉಗುರು ಬೆಚ್ಚಗಿನ ನೀರಿಗೆ ಹೋಲಿಸಲಾರರು?
ಅಲ್ಲಿ ಬರವಣಿಗೆಯ ನೈಜತೆ ಮತ್ತು ಬರಹಗಾರನ ಭಾವನೆ ಗೋಚರಿಸುತ್ತದೆ.ಭಾವನೆಗೆ ಬೆಲೆ ಬರುವುದೇ ನೈಜತೆ ಕೊಟ್ಟಾಗ..ಬದುಕಿನಲ್ಲಿ ನೈಜತೆಯ ಪ್ರಶ್ನೆ ಇಲ್ಲ.ಬದುಕಿನಲ್ಲಿ ನಿಜ,ಮಿಥ್ಯ ಬಂದರೆ ನಾವು ಸುಳ್ಳು ಬದುಕನ್ನು ಬಾಳಬಹುದೇ?ಎಂಬ ಪ್ರಶ್ನೆ ಕಾಡುವುದು ಖಚಿತ..ಅದು ವಿಪರ್ಯಾಸ..ಅದು ಅಪಹಾಸ್ಯ..
.............ನೈಜತೆಯೆಂಬ ಬದುಕಿಗೆ ನಿಮ್ಮ ಅಭಿಪ್ರಾಯ ಏನು?............

Thursday, March 17, 2011

ಕನಸಿನ ಕನ್ನಡಿ..

ಸಂಜೆಯ ಅಂಚಿನಲ್ಲಿ,
ಹ್ಱದಯದ ಕವನವೆಂದು,
ಸಪ್ತಸ್ವರ ಹಾಡುವೆ ನಿನಗೆ,
ತಿರುಗಿ ನೀ ನೊಡಲೇಂದು!

ಕನಸಿನ ಕನ್ನಡಿಯಲ್ಲಿ,
ಬರೆದಿಡುವೆ ನಿನ್ನ ಹೆಸರಾ,
ಮನಸಿನ ನೋವ ತಿಳಿದು,
ಈ ಮಾತ ಮೌನದಲ್ಲಿ!!

ಭರಸದ ಕಂಪನದಿಂದ,
ಕುಡಿಯೊಡೆವ ಪ್ರೀತಿಯಾಗಿ,
ಚಲಿಸುವೆ ನನ್ನೊಳಗೆ,
ಸಾಗುತಾ ಬಲು ದೂರವಾಗಿ!!!

ಸಿಡಿಲು ಬಡಿದ ಸದ್ದಿನಂತೆ,
ಪ್ರೀತಿ ಉಕ್ಕಿ ಬರುವ ಹಾಗೆ,
ತಾಳ ತಪ್ಪಿ ಕುಣಿಯುತಿದೆ,
ಈ ನನ್ನ ಹ್ಱದಯ, ಈ ನನ್ನ ಮನ...!!